ಭಾರತದಲ್ಲಿ ಶಿಕ್ಷಣ ಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಆಗಾಗ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಅಥವಾ ವಿವಿಧ ಬಗೆಯ ವಿದ್ಯಾರ್ಥಿವೇತನಗಳು ಅಥವಾ ಸ್ಕಾಲರ್ಶಿಪ್ ಗಳನ್ನು ನೀಡಲಾಗುತ್ತದೆ. ಇದೀಗ ಅಂತಹದ್ದೆ ಒಂದು ವಿದ್ಯಾರ್ಥಿ ವೇತನವನ್ನು ಕೇಂದ್ರದ ಮೋದಿ ಸರ್ಕಾರದಿಂದ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಒಂದರಿಂದ ಪಿಜಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗು ಉನ್ನತಮಟ್ಟದ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಈ ಯೋಜನೆ ಅಡಿ ಪ್ರತಿ ವಿದ್ಯಾರ್ಥಿಗಳಿಗೆ ರೂಪಾಯಿ 75 ಸಾವಿರ ವರೆಗಿನ ಆರ್ಥಿಕ ನೆರವು ನೀಡಲಾಗುತ್ತದೆ. ಆದ್ದರಿಂದ ಇವತ್ತು ನಾವು ನಿಮಗೆ ಈ ಯೋಜನೆಯ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ ? ಈ ಯೋಜನೆ ಉದ್ದೇಶವೇನು ? ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಪ್ರಮುಖ ಮತ್ತು ಐಚ್ಚಿಕ ದಾಖಲೆಗಳು ಯಾವುವು ? ಮತ್ತು ಅನೇಕ ಇತರ ಮಾಹಿತಿಗಳನ್ನು ಈ ಪ್ರಸ್ತುತ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಆದ್ದರಿಂದ ದಯವಿಟ್ಟು ಕೊನೆಯವರೆಗೂ ಓದಿ.
ಯೋಜನೆಯ ಪ್ರಮುಖ ಪ್ರಯೋಜನಗಳು
1. ಅಖಿಲ ಭಾರತೀಯ ಸ್ಕಾಲರ್ಶಿಪ್ 2023ಕ್ಕೆ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಸರ್ಕಾರವು 75,000 ಆರ್ಥಿಕ ಸಹಾಯವನ್ನು ಒದಗಿಸುತ್ತದೆ.
2. ಈ ಯೋಜನೆಯಿಂದ ಅರ್ಜಿದಾರರು ಶಿಕ್ಷಣ ಪಡೆಯಲು ಯಾವುದೇ ರೀತಿಯಲ್ಲಿ ಯಾವುದೇ ಬ್ಯಾಂಕುಗಳಲ್ಲಿ ಸಾಲವನ್ನು ತೆಗೆದುಕೊಳ್ಳುವ ಅನಿವಾರ್ಯತೆ ಬರುವುದಿಲ್ಲ.
3. ಈ ಯೋಜನೆಯ ಸ್ಕಾಲರ್ಶಿಪ್ ಸಹಾಯಧನದಿಂದ ಒಬ್ಬ ವಿದ್ಯಾರ್ಥಿಯು ಉನ್ನತ ಮಟ್ಟದ ಶಿಕ್ಷಣವನ್ನು ಪಡೆಯಲು ಸಹಾಯವಾಗುತ್ತದೆ.
4.ನಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣವೊಂದು ವ್ಯಾಪಾರ ಆದಂತೆ ಗೋಚರಿಸುತ್ತದೆ ಆದ್ದರಿಂದ ಈ ಯೋಜನೆಯಲ್ಲಿ ವಿದ್ಯಾರ್ಥಿವೇತನವನ್ನು ಪಡೆದು ಒಬ್ಬ ವಿದ್ಯಾರ್ಥಿಯು ತನ್ನ ಉನ್ನತ ಮಟ್ಟದ ಶಿಕ್ಷಣವನ್ನು ಮುಗಿಸುವುದಕ್ಕೆ ಇದೊಂದು ಒಳ್ಳೆಯ ಸುವರ್ಣವಕಾಶ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
1. ಅಖಿಲ ಭಾರತೀಯ ಸ್ಕಾಲರ್ಶಿಪ್ 2023 ರ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
2. ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರನು ಭಾರತದ ನಾಗರೀಕನಾಗಿರಬೇಕು ಅಂದರೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯು ಭಾರತದ ಖಾಯಂ ನಿವಾಸಿ ಆಗಿರಬೇಕು.
3. ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯು ತನ್ನ ಹಿಂದಿನ ವರ್ಷದ ತರಗತಿಯಲ್ಲಿ ಕನಿಷ್ಠ ಶೇ 50% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯ ಕುಟುಂಬ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
4. ಅಖಿಲ ಭಾರತೀಯ ಸ್ಕಾಲರ್ಶಿಪ್ 2023 ಯೋಜನೆಯಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಕುಟುಂಬವು ಕೌಟುಂಬಿಕ ಅಥವಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಮತ್ತು ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ತನ್ನ ಪೋಷಕರನ್ನು ಕಳೆದುಕೊಂಡ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
ಈ ಯೋಜನೆಯಡಿಯಲ್ಲಿ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ಬಯಸುತ್ತಿರುವ ವಿದ್ಯಾರ್ಥಿ / ವಿದ್ಯಾರ್ಥಿನಿಯರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ.
1.ಮೊದಲನೇಯದಾಗಿ ವಿದ್ಯಾರ್ಥಿಗಳು ಅಖಿಲ ಭಾರತೀಯ ಸ್ಕಾಲರ್ಶಿಪ್ ನ ಅಧಿಕೃತ ವೆಬ್ಸೈಟ್ ಪೋರ್ಟಲ್ ಗೆ ಭೇಟಿ ನೀಡಬೇಕು ( ಅಧಿಕೃತ ವೆಬ್ಸೈಟ್ನ ಲಿಂಕ್ ಅನ್ನು ಕೆಳಗಡೆ ನೀಡಲಾಗಿದೆ ).
2. ಲಿಂಕ್ ಅನ್ನು ತೆರೆದ ನಂತರ ನಿಮಗೆ ಹೋಂ ಪೇಜ್ ಸಿಗುತ್ತದೆ ಹೋಂ ಪೇಜ್ ನಲ್ಲಿ ವಿದ್ಯಾರ್ಥಿವೇತನ ಯೋಜನೆಗೆ ಸಂಬಂಧಿಸಿದ ಪುಟವನ್ನು ಆಯ್ಕೆ ಮಾಡಿಕೊಳ್ಳಬೇಕು.
3. ನಂತರ ನಿಮಗೆ ವಿವಿಧ ರೀತಿಯ ಸ್ಕಾಲರ್ಶಿಪ್ ಗಳು ಕಾಣಸಿಗುತ್ತದೆ ಆ ಪುಟದಲ್ಲಿ ಆಲ್ ಇಂಡಿಯಾ ಸ್ಕಾಲರ್ಶಿಪ್ 2023 ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
4. ತದನಂತರ ಅರ್ಜಿ ನಮೂನೆಯು ನಿಮ್ಮ ಮುಂದೆ ತೆರೆಯುತ್ತದೆ ನೀಡಲಾದ ಮಾಹಿತಿಯನ್ನು ಸರಿಯಾಗಿ ಗಮನಿಸಿಕೊಂಡು ಕೇಳಲಾದ ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು ನಂತರ ಭರ್ತಿಮಾಡಿದ ಅರ್ಜಿಯನ್ನು ಕೆಳಗೆ ನೀಡಲಾದ ಸಬ್ಮಿಟ್ (Submit) ಬಟನ್ ಅನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
ಉಪಯುಕ್ತವಾಗುವ ಪ್ರಮುಖ ಲಿಂಕ್ ಗಳು
ನಮ್ಮ ವಾಟ್ಸಪ್ 📱 ಗ್ರೂಪ್ ಅನ್ನು ಸೇರಲು | Click here |
ಅಧಿಕೃತ ವೆಬ್ಸೈಟ್ ಗಾಗಿ | Click here |
ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು | Click here |